ಯಡಿಯೂರಪ್ಪ ಯಾಕೆ ಹೀಗೆ ? ನಮ್ಮ ರಾಜಕಾರಣಿಗಳಲ್ಲಿ ಬದಲಾವಣೆ ಸಾದ್ಹವೇ ?


ಯಡಿಯೂರಪ್ಪ ಯಾಕೆ ಹೀಗೆ ?


 
ಹಾಗೆ ನೋಡಿದ್ರೆ ಯಾರರ ಬಳಿ ಯಾವುದು ಇಲ್ಲವೋ ಅದೇ ಹೆಚ್ಚು ಬೇಕೆನ್ನುವುದು ಮನುಷ್ಯನ ಸಹಜ ಪ್ರಕೃತಿ.ಮಧ್ಯಮ ವರ್ಗಹದ ಜನಕ್ಕೆ ಮೇಲು ವರ್ಗಹದ ಗುಂಪಿಗೆ ಸೇರಲು ಹರಪ್ರಯಾಸ ನಡಿಸುತ್ತಾರೆ. ಅದಕ್ಕೆ ಮೆಟ್ಟಲು ಜೀವನದ ಮೌಲ್ಯದ ತಿಲಾಂಜಲಿ. ಹೇಗೋ ಮೇಲೆ ಬಂದರೆ ಆಯಿತು ಅನ್ನೋಧಕಿಂತ ಹೇಗೆ ಮೇಲೆ ಬಂದೆ ಅನ್ನುವುದು ಮುಖ್ಯ.ಈ ಸಂಪ್ರದಾಯವನ್ನು ಬಲವಾಗಿ ತುಂಬಲು ತಂದೆ-ತಾಯಿಗಳು ಪ್ರಯತ್ನಿಸುವುದು ಉತ್ತಮ.ಈಗಿನ ಮಿಂಚಿನ ಪ್ರಪಂಚದಲ್ಲಿ ಈ ಮೌಲ್ಯದ ಬಗ್ಗೆ ಮಾತಾಡಿದರೆ ತುಂಬ ಹಳೆಯ ರೀತಿ ಆಗುತ್ತೆ, ಆದ್ರೆ ಮಕ್ಕಳಿಗೆ ತಿಳಿ ಹೇಳದಿದ್ದರೆ ಅವರು ಈಗಿನ ರಾಜಕಾರಣಿಯ ಥರ ಆಗುತ್ತಾರೆ. ನಾವು ಯಾವಾಗ ಮೌಳಧಾರಿಥ ರಾಜಕಾರಣ ಮಾಡುವುದು ? ನನಗೆ ತಿಳಿದಂತೆ ರಾಮಕೃಷ್ಣ ಹೆಗ್ಡೆ ಅವರು ಇದರ ಬಗ್ಗೆ ಬಹಳ ಮಾತಾಡು ತಿದ್ದರು.
 
ನಮ್ಮ ದೇಶದಲ್ಲಿ ಅಧಿಕಾರದ ದಾಹ ಯಾವತ್ತು ಹಿಂಗುವುದೋ ದೇವರೇ ಬಲ್ಲ ? ಈ ಅಧಿಕಾರಾಧ ದಹಾ ಮನುಷ್ಯನ ಸ್ವಂತಿಕೆ,ಸ್ವಾಭಿಮಾನವನ್ನು ಹೇಗೆ ಮಾರಿಕೊಳ್ಳುತದ್ದೆ ಎನ್ನಲು ಯಡಿಯೂರಪ್ಪ’ರೆ ಸಾಕ್ಷಿ..ಕರ್ನಾಟಕಕ್ಕೆ ಮುಖ್ಯ ಮಂತ್ರಿ ಗಳು ಯಾವಾಗಲು ಶಪನೆ ಅನ್ನಿಸುತ್ತೆ..ಅವರು ಯಾವಾಗ ತಮ್ಮ ಪದವಿ ಬಿಟ್ಟು ಹೊಗ್ಗುತ್ತರೋ ಅನ್ನುವಸ್ತು ಜಿಗುಪ್ಸೆ ಹುಟ್ಟಿಸುತ್ತಾರೆ. ಬಹುಷಃ ರಾಮಕೃಷ ಹೆಗಡೆ,ವೀರಪ್ಪ ಮೊಇಲಿ ಇದಕ್ಕೆ ಹೊರತು ಅನಿಸುತ್ತೆ..ಅದರಲಂತೂ ಈಚಗಿನ ಮುಖ್ಯ ಮಂತ್ರಿಗಳು ಜನರಿಗೆ ವಾಕರಿಕೆ ಬರುವಷ್ಟು ಕೆಟ್ಟ ಸಂಪ್ರದಾಯ ನಡಿಸೆ ಬಂದಿಧಾರೆ. ಕುಮಾರಸ್ವಾಮಿ,ಯಡಿಯೂರಪ್ಪ ಅಂತು ತಮಗೆ ಸಾಟಿ ಇಲ್ಲವಂತೆ ಭ್ರಷಚಾರದಲ್ಲಿ ತೊಡಗಿದ್ದಾರೆ. ಈ ರಾಜ್ಯದ ಜನತೆ ಖಂಡಿತ ಇದಕ್ಕಿಂತ ಒಳ್ಳೆಯ ಉಪಚಾರ ಬಯಸುತ್ತಾರೆ.
ಯಡಿಯೂರಪ್ಪ ಮುಖ್ಯ ಮಂತ್ರಿ ಪದವಿ ಕಳೆದು ಕೊಂಡ ಮೇಲು ಯಾಕೆ ಹೀಗೆ ಪ್ರಚಾರದಲ್ಲಿ ಇರಲು ಬಯಸುತ್ತಾರೆ ? ಜನಕ್ಕೆ ಇವರು ಬೇಕಿಲ್ಲ,ಆದರೆ ಇವರಿಗೆ ಜನರು ಬೇಕಿದೆ ತಮ್ಮ ಬೀಳೆ ಬೇಯೆಸಿ ಕೊಳ್ಳಲು.. ಅವರು ವಿರೋಧ ಪಕ್ಷ ದಲ್ಲಿ ಇದ್ದಾಗ ಎಷ್ಟು ಗೌರವ ಸಂಪಾದಿಸಿದ್ದರೋ ಅವೆಲ್ಲವನ್ನು ಕಳೆದುಕೊಂಡಿದ್ದಾರೆ. ಆಡಳಿತ ಪಕ್ಷಕ್ಕೆ ಸಿಂಹ ಸಪ್ನಾವಾಗಿದ್ದ ಯದಿಯುರ್ರಪ್ಪ ಈಗ ಎಲ್ಲರಿಗೂ ತಲೆ ನೋವಾಗಿದ್ದರೆ. ಅವರು ತಮ್ಮ ಹುದ್ದೆಗೆ ಗೌರವ ಕೊಟ್ಟು ತಮ್ಮ ಕಾರ್ಯ ವೈಕರಿ ತಿದ್ದುಕೊಳ್ಳಬೇಕಿದೆ. ಅವರ ರಥ ಯಾತ್ರೆ ಯಾರಿಗೆ ಬೇಕಿದೆ ಈಗ ? ಜನರಿಗೆ ಇವರ ಜಗಳ ಬಿಡಿಸಲು ಪರುಸೋತ್ತು ಇಲ್ಲ ಈಗ, ಆದರೆ ಅವರಿಗೆ ಬೇಕಿರುವುದು ಒಳ್ಳೆಯ ಬದುಕು. ರಾಜ್ಯದಲ್ಲಿ ಸಾವಿರ ಮುಖ್ಯ ಕೆಲಸ ಇದೆ,ಅದನ್ನು ಬಿಟ್ಟು ಯಡಿಯೂರಪ್ಪ ಹಿಂದೆ ರಥ ಯಾತ್ರೆ ಹೋಗೋದಕ್ಕೆ ಜನಕ್ಕೆ ಬೇರೆ ಕೆಲಸ ಇಲ್ಲವೇ ? ಇವರಿಗೆ ಏನಾದ್ರು ಸಾಮಾಜಿಕ ಕಳಕಳಿ ಇದ್ರೆ ಅವರು ಹುದ್ದೆ ಯಲ್ಲಿ ಇದ್ದಾಗಲೇ ಮಾಡಬೇಕಿತ್ತು ಅದ ಬಿಟ್ಟು ಈಗ ರಥ ಯಾತ್ರೆ ಅಂತ ಜನರನ್ನು ಮೂರ್ಖ ಮಾಡಲು ಹೊರಟಿದ್ದಾರೆ. ಇದು ದಾರಿ ತಪ್ಪಿಸುವ ತಂತ್ರ. ಅವರು ಜನರ ಬೆಂಬಲದಿಂದ ತಮ್ಮ ಮೇಲಿರುವ ಆಪಾಧನೆ ಗಳನು ಪ್ರಭಾವ ಬೀರಿಸಲು ಯತ್ನಿಸುತ್ತಿಧಾರೆ. ಇದ್ದೊಂದು ಕೆಟ್ಟ ಸಂಪ್ರದಾಯಕ್ಕೆ ದಾರಿ.
 
ಒಮ್ಮೆ ಪದವಿ ಇಂದ ಹೋದ ನಂತರ ಅವರ ಪರಮಾಪ್ತಿ ಯಲ್ಲಿ ಬರುವಂತ ಕರ್ಯಗಲ್ಲನು ಮಾತ್ರ ಮಾಡಬೇಕೆ ಹೊರತು,ನನ್ನಿಂಧನೆ ಈ ಪಕ್ಷ ಇರುವುದು ಅಂದ್ರೆ ಅದು ಸೊಕ್ಕುಥನ ಅನ್ನಿಸುತ್ತೆ.ನಮಗೆ ಒಳ್ಳೆ ಆಡಳಿತ ಬೇಕೇ ಹೊರತು ಯಾರು ಆಡಳಿತ ನಡಿಸುತ್ತಾರೆ ಅನ್ನುವುದು ಮುಖ್ಯ ಆಗುವುದಿಲ್ಲ. ನಮ್ಮ ಸಂವಿಧಾನ ದಲ್ಲೂ ಸ್ವಲ್ಪ ಬದಲಾವಣೆ ಬೇಕಿದೆ ಅನ್ನಿಸುತ್ತೆ..ರಾಜ್ಯಪಾಲ ಅನ್ನುವ ಗೌರವ ಹುದ್ದೆ ಹೊಂದಿದ ಮೇಲೆ ಮಂತ್ರಿ,ಮುಖ್ಯಮಂತ್ರಿ ಆಗುವುದು ಎಷ್ಟು ಸರಿ ? ವಯಸ್ಸು ಆದಂತೆ ಅರ್ಹತೆ ಹೆಚಿಸುತ್ತೆ ಆದ್ರೆ ಇಲ್ಲಿ ಭ್ರಷಚಾರವು ಹೆಚ್ಚುವ ಸಾದ್ಯತೆ ಇದೆ. ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಆಗಿದಕಿಂತ ಅಧಿಕಾರದಲ್ಲಿ ಇಲ್ಲದಿದ್ದಾಗಲೇ ಹೆಚ್ಚು ಜನಪ್ರಿಯರಾಗಿದ್ದರು. ಈ ಅಧಿಕಾರ ಅನ್ನುವ ಧಾಹ ಮನುಷ್ಯನ ಸ್ವಾಭಿಮಾನವನ್ನು ಪಣಕ್ಕೆ ಇಟ್ಟು ಬಿಡುತೆ.
 
ಹಾಗೆ ನೋಡಿದ್ರೆ ಯಾರರ ಬಳಿ ಯಾವುದು ಇಲ್ಲವೋ ಅದೇ ಹೆಚ್ಚು ಬೇಕೆನ್ನುವುದು ಮನುಷ್ಯನ ಸಹಜ ಪ್ರಕೃತಿ.ಮಧ್ಯಮ ವರ್ಗಹದ ಜನಕ್ಕೆ ಮೇಲು ವರ್ಗಹದ ಗುಂಪಿಗೆ ಸೇರಲು ಹರಪ್ರಯಾಸ ನಡಿಸುತ್ತಾರೆ. ಅದಕ್ಕೆ ಮೆಟ್ಟಲು ಜೀವನದ ಮೌಲ್ಯದ ತಿಲಾಂಜಲಿ. ಹೇಗೋ ಮೇಲೆ ಬಂದರೆ ಆಯಿತು ಅನ್ನೋಧಕಿಂತ ಹೇಗೆ ಮೇಲೆ ಬಂದೆ ಅನ್ನುವುದು ಮುಖ್ಯ.ಈ ಸಂಪ್ರದಾಯವನ್ನು ಬಲವಾಗಿ ತುಂಬಲು ತಂದೆ-ತಾಯಿಗಳು ಪ್ರಯತ್ನಿಸುವುದು ಉತ್ತಮ.ಈಗಿನ ಮಿಂಚಿನ ಪ್ರಪಂಚದಲ್ಲಿ ಈ ಮೌಲ್ಯದ ಬಗ್ಗೆ ಮಾತಾಡಿದರೆ ತುಂಬ ಹಳೆಯ ರೀತಿ ಆಗುತ್ತೆ, ಆದ್ರೆ ಮಕ್ಕಳಿಗೆ ತಿಳಿ ಹೇಳದಿದ್ದರೆ ಅವರು ಈಗಿನ ರಾಜಕಾರಣಿಯ ಥರ ಆಗುತ್ತಾರೆ. ನಾವು ಯಾವಾಗ ಮೌಳಧಾರಿಥ ರಾಜಕಾರಣ ಮಾಡುವುದು ? ನನಗೆ ತಿಳಿದಂತೆ ರಾಮಕೃಷ್ಣ ಹೆಗ್ಡೆ ಅವರು ಇದರ ಬಗ್ಗೆ ಬಹಳ ಮಾತಾಡು ತಿದ್ದರು.
 
ಸೆಪ್ಟೆಂಬರ್ ೧೧ ಹತ್ತು ವರುಷ MEMORIAL ‘ಗೆ ಅಮೆರಿಕ ರಾಷ್ಟ್ರಪತಿ ಒಬಾಮ ಅವರು ಮಾಜಿ ರಾಷ್ಟ್ರಪತಿ ಬುಶ್ ನನ್ನು ಆಹ್ವನಿಸದರೆ,ಅವರು ಬರೋಲ್ಲ ಅಂದ್ರು. ಕಾರಣ ಒಮ್ಮೆ ಹುದ್ದೆ ಬಿಟ್ಟ ನಂತರ ಸುದ್ದಿಯಲ್ಲಿ ಇರಬಾರದು ಅಂತ..ಆದ್ರೆ ಯಡಿಯೂರಪ್ಪ’ಗೆ ಸದಾನಂದ ಗೌಡ ಅವರಗಿಂತ ಹೆಚ್ಚು ಸುದ್ದಿಯಲ್ಲಿ ಇರಲು ಕಾತರ..ನಮ್ಮ ಶಾಲೆ ದಿನಗಳು ಜ್ಞಾಪಕ್ಕೆ ಬರುತ್ತೆ..ಚಿಕ್ಕವರಾಗಿದ್ದಾಗ ನಮ್ಮ ಮಾಸ್ತರ ಗಮನ ಸೆಳೆಯಲು ಏನೆಲ್ಲ ಮಾಡಿಲ್ಲ,ಅದು ಸಹಜ ಮಕ್ಕಳ ಬುದ್ದಿ,ಅದು ಕಾಲ ಕಳೆದ ಹಾಗಿ ಮಾಯವಾಗಿ ವಿಶಾಲ ಬುದ್ಧಿ ಬೆಳೆಯುವುದು ಮನುಷ್ಯನ ಸಹಜ ಕ್ರಿಯೆ,ಆದ್ರೆ ಯಡಿಯೂರಪ್ಪ ಅವರ ವಿಷಯದಲ್ಲಿ ಕಥೆನೇ ಬೇರೆ..ಅವರು ದೇವೇಗೌಡ ರಿಗೆ ನಾಚಿಕೆ ಆಗುವ ರೀತಿ ನಡಿದು ಕೊಳ್ಳುತಿದ್ದಾರೆ. ಈ ವಿಷ್ಯ ಬರಿತಿದ್ದ ಹಾಗೆ ಅಡ್ವಾಣಿ ಅವರು ರಥ ಯಾತ್ರೆ ಸುದ್ದಿ ಓದಿದೆ..ಅವರಿಗೂ ಕೂಡ ಸುದ್ದಿ ಯಲ್ಲಿ ಇರಲು ಇಷ್ಟ..ಎಲ್ಲೋ insecurity feeling ಕಾಡುತ್ತ ಇದೆ ಅನ್ನಿಸುತ್ತೆ..
 
ನಮ್ಮ ರಾಜಕಾರಣಿಗಳು ರಾಜ್ಯ ಮತ್ತು ರಾಷ್ಟ್ರಕ್ಕೆ ಗೌರವ ಬರುವಂತೆ ನಾಡಿದು ಕೊಳ್ಳ ಬೇಕು ಅದು ಬಿಟ್ಟ ಬೀದಿ ರಾಜಕೀಯ ಮಾಡುತ್ತ ಇದ್ದಾರೆ ಅದು ಶೋಭೆ ಥರುವಂತದಲ್ಲ. ಇದು ಒಬ್ಬರಿಂದ ಆಗುವನ್ಥದಲ್ಲ,ಆದ್ರೆ ಎಲ್ಲರು ಸೆರೆ ನಮ್ಮ ರಾಜಕೀಯವನ್ನು ಮುಂದಿನ ಹಂತಕ್ಕೆ ತೆಗೆದು ಕೊಂಡು ಹೋಗೋ ಪಣ ತೊಡಬೇಕು. ನಮ್ಮ ರಾಜಕಾರಣಿಗಳಿಗೆ ಗೊತ್ತು ಜನರ ನಾಡಿ ಬಡಿತ, ಸಾಧು ಥರ ಇದ್ದಾರೆ ಏನು ಸಿಗೋದಿಲ್ಲ ಅಂತ ಗೊತ್ತು, ಸಿಗೊಕ್ಕೆ ಅವರೇನು ಮನ ಮೋಹನ ಸಿಂಗ್’ಏ ?
ನಮ್ಮಲಿ ಬದಲಾವಣೆ ಸಾದ್ಹವೇ ?

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s